ಬೆಂಗಳೂರು:
ನಾಳೆ ಅರಮನೆ ಮೈದಾನದಲ್ಲಿ ಪುನೀತ್ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಹಿನ್ನಲೆ, ಬಂದೋಬಸ್ತ್ ಮಾಡಿಕೊಡಲು ಡಾ.ರಾಜ್ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ನಾಳೆ 25 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ, ಅರಮನೆ ಮೈದಾನದ ಸುತ್ತಮುತ್ತ 1,000 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ತ್ರಿಪುರ ವಾಹಿನಿಯಲ್ಲಿ ಅಭಿಮಾನಿಗಳಿಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾಳೆ 11:30 ರಿಂದ ಅನ್ನಸಂತರ್ಪಣೆ ಪ್ರಾರಂಭವಾಗಲಿದ್ದು, 5 ಸಾವಿರ ಜನರು ಒಟ್ಟಿಗೆ ಕೂತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. 100 ಮಂದಿ ಭಟ್ಟರು ಹಾಗೂ 700 ಸಹಾಯಕರು ಅಡುಗೆ ತಯಾರಿಸಲಿದ್ದಾರೆ. ಬಫೆ ಸಿಸ್ಟಂ ಬದಲು ಬಾಳೆ ಎಲೆಯಲ್ಲಿ ಊಟ ಹಾಕಲು ಕುಟುಂಬಸ್ಥರು ನಿರ್ಧರಿಸಿದ್ದಾರೆ……