Breaking News

ಇಂದು ಕೊನೆಗೊಳ್ಳಲಿದೆ ವಿರಾಟ್ ಕೊಹ್ಲಿಯ ಟಿ20 ನಾಯಕತ್ವ..!

ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್....

SHARE......LIKE......COMMENT......

ನವದೆಹಲಿ:

ಟಿ20 ವಿಶ್ವಕಪ್ 2021 ಭಾರತಕ್ಕೆ ಅತ್ಯಂತ ಭಯಾನಕವಾಗಿದೆ ಎಂದು ಸಾಬೀತಾಗಿದೆ. ಭಾನುವಾರ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸುವುದರೊಂದಿಗೆ ಭಾರತ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಸೋಮವಾರ ನಡೆಯಲಿರುವ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯವು ಟಿ20 ನಾಯಕನಾಗಿ ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯವಾಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಈಗಾಗಲೇ ಘೋಷಿಸಿದ್ದರು. ಈ ಬಾರಿ ಭಾರತವನ್ನು ಮೊದಲ ಬಾರಿಗೆ ವಿಶ್ವಕಪ್ (ಟಿ20 ಮತ್ತು ODI) ನಲ್ಲಿ ಪಾಕಿಸ್ತಾನವು ಸೋಲಿಸಿತು ಮತ್ತು ನಂತರ ನ್ಯೂಜಿಲೆಂಡ್ ತಂಡದ ವಿರುದ್ಧವೂ ಭಾರತ ಸೋಲುಂಡಿತು. ಇದು ಶಾಸ್ತ್ರಿ ಮತ್ತು ಅವರ ಕೋಚಿಂಗ್ ಸಿಬ್ಬಂದಿಯ ಕೊನೆಯ ಪಂದ್ಯವಾಗಿದೆ.

ವಿರಾಟ್ ಕೊಹ್ಲಿಯ (Virat Kohli) ಮಟ್ಟಿಗೆ ಹೇಳುವುದಾದರೆ ಮುಂಬರುವ ದಿನಗಳಲ್ಲಿ ಏಕದಿನ ಪಂದ್ಯಗಳ ನಾಯಕತ್ವವನ್ನೂ ಕಳೆದುಕೊಳ್ಳಬೇಕಾಗಬಹುದು.2023ರ ಏಕದಿನ ವಿಶ್ವಕಪ್ ವೇಳೆಗೆ ವಿರಾಟ್ ಕೊಹ್ಲಿಗೆ 34-35 ವರ್ಷ ವಯಸ್ಸಾಗಿರುತ್ತದೆ. 2023ರ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ವಿಶ್ವಕಪ್‌ನಂತಹ ಪಂದ್ಯಾವಳಿಯನ್ನು ಗೆಲ್ಲಲು ಶಕ್ತರಿರುವಂತಹ ಹೊಸ ನಾಯಕನನ್ನು ಬಿಸಿಸಿಐ (BCCI) ಟೀಂ ಇಂಡಿಯಾಕ್ಕಾಗಿ ಹುಡುಕುತ್ತಿದೆ. ಟೀಂ ಇಂಡಿಯಾ ನಾಯಕತ್ವದ ರೇಸ್ನಲ್ಲಿ ನಾಲ್ಕು ಪ್ರಬಲ ಕ್ರಿಕೆಟಿಗರ ಹೆಸರು ಕೇಳಿ ಬರುತ್ತಿದೆ.

ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್, ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಈ 4 ಕ್ರಿಕೆಟಿಗರ ಹೆಸರು :

1. ರೋಹಿತ್ ಶರ್ಮಾ :

ಭಾರತದ ಮುಂದಿನ ನಾಯಕನಾಗಲು ರೋಹಿತ್ ಶರ್ಮಾ (Rohit Sharma) ಮೊದಲ ಆಯ್ಕೆಯಾಗಲಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ದೊಡ್ಡ ಪಂದ್ಯಾವಳಿಗಳನ್ನು ಗೆಲ್ಲುವಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಸ್ಟ್ಯಾಂಡ್‌ಬೈ ನಾಯಕರಾಗಿದ್ದಾಗ ಏಷ್ಯಾ ಕಪ್ ಮತ್ತು ನಿದಾಹಾಸ್ ಟ್ರೋಫಿ ತ್ರಿಕೋನ ಸರಣಿಯಂತಹ ದೊಡ್ಡ ಟೂರ್ನಿಗಳ ಟ್ರೋಫಿಯನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ ಅವರನ್ನು ಮಹೇಂದ್ರ ಸಿಂಗ್ ಧೋನಿಯಂತೆ ಕೂಲ್ ಕ್ಯಾಪ್ಟನ್ ಎಂದು ಪರಿಗಣಿಸಲಾಗಿದೆ.

2. ರಿಷಬ್ ಪಂತ್ :

ರಿಷಬ್ ಪಂತ್ ಟೀಂ ಇಂಡಿಯಾದ ಮುಂದಿನ ನಾಯಕನಾಗಬಹುದು ಎಂದು ಹೇಳಲಾಗುತ್ತಿದೆ. ಪಂತ್ ಕಳೆದ ಕೆಲವು ತಿಂಗಳುಗಳಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದು, ಈ ಕಾರಣದಿಂದಾಗಿಯೇ ಅವರ ಸ್ಥಾನವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ದೃಢಪಡಿಸಲಾಗಿದೆ. ರಿಷಬ್ ಪಂತ್ ಬುದ್ಧಿವಂತ ಮನಸ್ಸಿನ ಜೊತೆಗೆ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಲ್ಲಿ ಪಂತ್ ಉತ್ತಮ ಕೆಲಸ ಮಾಡಿದ್ದಾರೆ.

3. ಕೆಎಲ್ ರಾಹುಲ್ :

ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದರೆ ಕನ್ನಡಿಗ ಕೆಎಲ್ ರಾಹುಲ್ (KL Rahul) ಉತ್ತಮ ಆಯ್ಕೆಯಾಗಿದೆ. ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲೂ ಅವರ ಬ್ಯಾಟಿಂಗ್ ಉತ್ತಮವಾಗಿತ್ತು. ಕೆ. ಎಲ್. ರಾಹುಲ್ ಐಪಿಎಲ್ ಹಾಗೂ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂದಿನ T20 ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ, ಇದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ. 2023ರಲ್ಲಿ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ಭಾರತದ ಮುಂದಿನ ನಾಯಕನಾಗುವ ಅವಕಾಶವಿದೆ. ಕೆಎಲ್ ರಾಹುಲ್ ಒಬ್ಬ ಶ್ರೇಷ್ಠ ನಾಯಕ, ಶ್ರೇಷ್ಠ ವಿಕೆಟ್ ಕೀಪರ್ ಮತ್ತು ಅದ್ಭುತ ಬ್ಯಾಟ್ಸ್‌ಮನ್.

4. ಶ್ರೇಯಸ್ ಅಯ್ಯರ್ :

ಮುಂಬೈನ 26 ವರ್ಷದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 2017 ರಲ್ಲಿ ಭಾರತ ತಂಡಕ್ಕಾಗಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರ ನಾಯಕತ್ವದ ಬಗ್ಗೆ ಹೇಳುವುದಾದರೆ, ಐಪಿಎಲ್ 2018 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡದ ನಾಯಕರಾಗಿ ಅಯ್ಯರ್ ಅವರನ್ನು ನೇಮಿಸಲಾಯಿತು. ಇದರ ನಂತರ, ಐಪಿಎಲ್ 2020 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್‌ವರೆಗೆ ಪ್ರಯಾಣಿಸಿತ್ತು. ಶ್ರೇಯಸ್ ಅಯ್ಯರ್ ಅವರು ಮುಂದಿನ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಹರಾಜಿನಲ್ಲಿ ತಮ್ಮ ಹೆಸರನ್ನು ನೀಡಲು ನಿರ್ಧರಿಸಿದ್ದಾರೆ. ಬಹಳ ದಿನಗಳ ನಂತರ ಮತ್ತೊಂದು ಹೊಸ ತಂಡದಲ್ಲಿ ಅಯ್ಯರ್ ಅವರನ್ನು ನೋಡಬಹುದಾಗಿದೆ. ವಿಶೇಷವಾಗಿ ಅನೇಕ ತಂಡಗಳು ಅವರನ್ನು ತಮ್ಮ ನಾಯಕನನ್ನಾಗಿ ಮಾಡಲು ಬಯಸುತ್ತವೆ. ಈ ಪಟ್ಟಿಯಲ್ಲಿ ಮೊದಲ ಹೆಸರು RCB. ಈ ಹಿನ್ನೆಲೆಯಲ್ಲಿ ಅವರು ಭಾರತ ತಂಡದ ನಾಯಕತ್ವದ ಪ್ರಮುಖ ಸ್ಪರ್ಧಿ ಎಂದು ಹೇಳಿದರೆ ತಪ್ಪಾಗಲಾರದು…..