Breaking News

RRR ಚಿತ್ರೀಕರಣದ ಹಂತದಲ್ಲೇ ಭರ್ಜರಿ ಆಫರ್..!

ಸ್ಯಾಟಲೈಟ್ ಹಾಗೂ ಆಡಿಯೋ ರೈಟ್ಸ್​​150 ಕೋಟಿ......

SHARE......LIKE......COMMENT......

ಟಾಲಿವುಡ್/ಸಿನಿಮಾ:

ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್​​.ಎಸ್.ರಾಜಮೌಳಿ ಬಾಹುಬಲಿ  ಬಿಗ್ ಸಕ್ಸಸ್​ ಬಳಿಕ ಮಲ್ಟಿಸ್ಟಾರರ್​ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್​​ಆರ್​​ಆರ್​​ ಎನ್ನುವ ತಾತ್ಕಾಲಿಕ ಹೆಸರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸೋಮವಾರದಿಂದ ಎರಡನೇ ಹಂತದ ಶೂಟಿಂಗ್ ಆರಂಭಿಸಿದೆ. ರಾಜಮೌಳಿಯ ನೆಚ್ಚಿನ ನಟ ಜ್ಯೂ. ಎನ್​​ಟಿಆರ್​ ಹಾಗೂ ರಾಮ್​ಚರಣ್​ ತೇಜ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

RRR ಸಿನಿಮಾಗೆ ಚಿತ್ರೀಕರಣದ ಹಂತದಲ್ಲೇ ಭರ್ಜರಿ ಆಫರ್ ಬಂದಿದೆ,ಖ್ಯಾತ ಝೀ ಸಂಸ್ಥೆ ಸ್ಯಾಟಲೈಟ್ ಹಾಗೂ ಆಡಿಯೋ ರೈಟ್ಸ್​​ಗೆ ಆಫರ್​ ಮಾಡಿದೆ ಶೂಟಿಂಗ್ ಹಂತದಲ್ಲೇ ಈ ಚಿತ್ರಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ
ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್​ಗೆ ಈ ಭಾರಿ ಮೊತ್ತದ ಆಫರ್​ ನೀಡಲಾಗಿದ್ದು ಆದರೆ ನಿರ್ಮಾಪಕ ಡಿವಿವಿ ದಾನಯ್ಯ ಇದನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. 200 ಕೋಟಿ ನೀಡಿದಲ್ಲಿ ಮಾತ್ರ ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕು ನೀಡುವುದಾಗಿ ಹೇಳಿದ್ದಾರೆ….