ಶಿವಮೊಗ್ಗ:
ನಾನು ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಕೊಲೆಗೆ ಸುಪಾರಿ ಕೊಟ್ಟಿದ್ನಂತೆ. ನನ್ನ ವಿರುದ್ಧ ಬಳ್ಳಾರಿಯಲ್ಲಿ ದೂರು ದಾಖಲಿಸಲು ಹೋಗಿದ್ದರು ಎಂದು ಬಿಜೆಪಿ ನಾಯಕರ ಹೆಸರು ಹೇಳದೆ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಯಡಿಯೂರಪ್ಪನವರೇ ಮಾತಾಡುವಾಗ ಹಿಡಿತ ಇರಲಿ. ಅಕ್ರಮದಿಂದ ಹೊರಬರಲು ಏನೇನು ಮಾಡಿದ್ದೀರಿ ಗೊತ್ತು. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದ ಮುಂದೆ ಕುಳಿತು ಯೋಚನೆ ಮಾಡಿ, ಏನೇನು ಮಾಡಿದ್ದೀರಿ ಅನ್ನೋದು ಕಣ್ಮುಂದೆ ಬರುತ್ತೆ ಎಂದರು.
ಸರ್ಕಾರ ಯಾವ ರೀತಿ ಟೇಕ್ ಆಫ್ ಮಾಡಬೇಕು ಎನ್ನುವುದನ್ನು ಹೇಳಿಕೊಡಿ. ನಿಮಗೆ ಅನುಭವಿದೆ ಎಂದು ವ್ಯಂಗ್ಯವಾಡಿ, ಚೆಕ್ ಮುಖಾಂತರ ಲಂಚ ತೆಗೆದುಕೊಂಡಿದ್ದರಲ್ಲಾ… ನೀವು ಸಿಎಂ ಆಗಿ ಕೆಳಗಿಳಿದ ಮೇಲೆ ನಿಮ್ಮ ಸಂಸ್ಥೆಗೆ ಎಷ್ಟೆಷ್ಟು ಹಣ ದೇಣಿಗೆ ಬಂದಿದೆ ಎಂಬುದನ್ನು ಹೇಳಿ ಎಂದು ಬಿಎಸ್ವೈ ವಿರುದ್ಧ ಕಿಡಿ ಕಾರಿದರು…..