Breaking News

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಿಗ್-ಬಿ..!

ಅಭಿಮಾನಿಗಳ ಆತಂಕ ಕಡಿಮೆ....

SHARE......LIKE......COMMENT......

ಮುಂಬೈ: 

ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನದ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 9.45ಕ್ಕೆ ಅಮಿತಾಬ್ ಬಚ್ಚನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಮಿತಾಬ್ ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಬ್  ರೆಗ್ಯೂಲರ್ ಚೆಕಪ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಶುಕ್ರವಾರವೇ ಅಮಿತಾಬ್ ಡಿಸ್ಚಾರ್ಜ್ ಆದ ಕಾರಣ ಅವರ ಅಭಿಮಾನಿಗಳ ಆತಂಕ ಕಡಿಮೆ ಆಗಿದೆ. ಅಮಿತಾಬ್ ಆರೋಗ್ಯವಾಗಿದ್ದು, ಈಗ ಅವರು ಕ್ಷೇಮವಾಗಿದ್ದಾರೆ ಎಂದು ತಿಳಿದು ಬಂದಿದೆ…..