ಸ್ಯಾಂಡಲ್ವುಡ್:
ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಈ ತರಹದ ಸ್ಟೋರಿಗಳನ್ನು ಹುಡುಕಿಕೊಂಡು ಹೋಗ್ತಾರೋ ಅಥವಾ ಅವ್ರನ್ನೇ ಇಂಥಾ ಕಥೆಗಳು ಅರಸಿಕೊಂಡು ಬರ್ತಾವೋ ಗೊತ್ತಿಲ್ಲ.ಗಣೇಶ್ ಅಭಿನಯದ ಎರಡನೇ ಚಿತ್ರ ‘ಮುಂಗಾರು ಮಳೆ’ಯಿಂದಲೇ ಈ ಕಥೆ ಶುರುವಾಗುತ್ತೆ. ಈಗ ರಿಲೀಸ್ ಆಗ್ತಾ ಇರೋ ಆರೆಂಜ್ ಸಿನಿಮಾದಲ್ಲೂ ಈ ನಟನಿಗೆ ಸಿಗೋದು ಎಂಗೇಜ್ಮಂಟ್ ಆಗಿರೋ ಹುಡುಗಿ. ಇದನ್ನೇ ಸಿನಿಮಾದ ಡೈಲಾಗ್ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.ಆದ್ರೆ, ಗಣಿ ಅಭಿನಯದ ಸಾಕಷ್ಟು ಚಿತ್ರಗಳಲ್ಲಿ ಗಣೇಶ್ಗೆ ಸಿಗ್ತಿರೋರೆಲ್ಲ ಎಂಗೇಜ್ ಆಗಿರೋ ಹುಡುಗಿಯರೇ ಎನ್ನುವುದು ವಿಶೇಷ….
ಇನ್ನು ಮುಂಗಾರು ಮಳೆಯಲ್ಲಿ ಗಣೇಶ್ ಲವ್ ಮಾಡೋ ನಂದಿನಿಗೆ ಮೊದಲೇ ಎಂಗೇಜ್ಮೆಂಟ್ ಆಗಿರುತ್ತೆ. ಇದಾದ ಮೇಲೆ ಬಂದ ‘ಹುಡುಗಾಟ’ ಸಿನಿಮಾದಲ್ಲೂ ಗಣಿ ಲವ್ ಮಾಡೋ ಹುಡುಗಿ ಇನ್ನೊಬ್ಬ ಹುಡುಗನನ್ನ ಲವ್ ಮಾಡ್ತಾ ಇರ್ತಾಳೆ. ಗಾಳಿಪಟ ಚಿತ್ರದಲ್ಲಂತೂ ಗಣೇಶ್ಗೆ ವಿಧವೆಯ ಮೇಲೆ ಲವ್ ಆಗುತ್ತೆ. ‘ಅರಮನೆ’ ಸಿನಿಮಾದ ಹೀರೋಯಿನ್ ಗಣಿಗೆ ಸಿಗೋ ಮೊದಲೇ ಮತ್ತೊಬ್ಬನ ಮನದರಸಿಯಾಗಿರ್ತಾಳೆ. ಇದೇ ಥರಾ ಸಂಗಮ, ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲ್ಲಿ, ಏನೋ ಒಂಥರಾ, ಮದುವೆ, ಶ್ರಾವಣಿ ಸುಬ್ರಮಣ್ಯ, ದಿಲ್ ರಂಗೀಲಾ, ಖುಷಿ ಖುಷಿಯಾಗಿ, ಮುಂಗಾರು ಮಳೆ-2, ಮುಗುಳು ನಗೆ ಎಲ್ಲಾ ಸಿನಿಮಾದಲ್ಲೂ ಗಣೇಶ್ಗೆ ಸಿಗೋದೆಲ್ಲಾ ಎಂಗೇಜ್ ಆಗಿರೋ, ಲವ್ನಲ್ಲಿ ಬಿದ್ದಿರುವ, ಲವ್ನಲ್ಲಿ ಫೇಲ್ಯೂರ್ ಆಗೀರೋ ಹುಡುಗೀರೇ ಆಗಿರ್ತಾರೆ. ಈಗ ಆರೇಂಜ್ನಲ್ಲೂ ಇದೇ ಕಥೆ ಮುಂದುವರೆದಿದೆ……