Breaking News

ಕಾದಾಟದಲ್ಲಿ ಪ್ರಾಣತೆತ್ತ ಚಿರತೆ-ನಾಗರಹಾವು..!

ಚಾಮರಾಜೇಂದ್ರ ಮೃಗಾಲಯದಲ್ಲಿ ಘಟನೆ.....

SHARE......LIKE......COMMENT......

ಮೈಸೂರು : 

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಚಿರತೆ (ಜಾಗ್ವಾರ್‌) ಮತ್ತು ನಾಗರಹಾವಿನ ನಡುವೆ ನಡೆದ ಕಾಳಗದಲ್ಲಿ ಎರಡೂ ಮೃತಪಟ್ಟಿವೆ.

ಎಂದಿನಂತೆ ವೀಕೆಂಡ್‌ ಸವಿಯಲು ಪ್ರವಾಸಿಗರು ಭಾನುವಾರ ಮೃಗಾಲಯಕ್ಕೆ ಆಗಮಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಜಾಗ್ವಾರ್‌ ಇದ್ದ ಆವರಣಕ್ಕೆ ನಾಗರಹಾವೊಂದು ಪ್ರವೇಶಿಸಿದೆ. ಅಲ್ಲದೆ, ಬುಸುಗುಟ್ಟಿದೆ. ಇದರಿಂದ ಕೋಪಗೊಂಡ ಜಾಗ್ವಾರ್‌ ನಾಗರಹಾವಿನ ಮೇಲೆ ದಾಳಿ ಮಾಡಿದೆ. ನೋಡುನೋಡುತ್ತಿದ್ದಂತೆ ಕಾಳಗದ ಸ್ವರೂಪ ತೀವ್ರಗೊಂಡಿದೆ.

ಇಬ್ಬರು ಸೋಲನ್ನು ಒಪ್ಪಿಕೊಳ್ಳದೆ ಕದನಕ್ಕೆ ಇಳಿದಿವೆ. ಇವೆರಡರ ಕಾಳಗ ನೋಡಿದ ಸಾರ್ವಜನಿಕರು ಆತಂಕಗೊಂಡು ಮೃಗಾಲಯದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಮೃಗಾಲಯ ಅಧಿಕಾರಿಗಳು ಹಾಗೂ ವೈದ್ಯರು ಎರಡನ್ನು ಬೇರ್ಪಡಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎರಡು ಮೃತಪಟ್ಟಿವೆ. ಮೃಗಾಲಯದಲ್ಲಿ ಹಾವು ಕಚ್ಚಿ ಚಿರತೆ ಮೃತಪಟ್ಟಿರುವುದು ಇದೇ ಮೊದಲು. ಇದುವರೆಗೂ ಜಿಂಕೆ ಸೇರಿದಂತೆ ಸಣ್ಣ-ಪುಟ್ಟ ಪ್ರಾಣಿಗಳು ಹಾವು ಕಚ್ಚಿ ಮೃತಪಟ್ಟಿದ್ದವು…….